ಸುಲಭ ಚಿಕಿತ್ಸೆ

75.00

Add to Wishlist
Add to Wishlist
Email

Description

ಸುಲಭ ಚಿಕಿತ್ಸೆ : ಪಂ. ತಾರಾನಾಥ

ಸಂ: ಧ್ರುವನಾರಾಯಣ

ಇಂದು ವೈದ್ಯಕೀಯ ರಂಗದಲ್ಲಿ integrated medicine ಎಂದೇ ಕರೆಯಲಾಗುವ ಪದ್ಧತಿಯನ್ನು ತಾರಾನಾಥರು ಸುಮಾರು ನೂರು ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದರು. ಎಲ್ಲರಿಗೂ ತಿಳಿದಂತೆ ಅವರು ಓದಿದ್ದು ಹೈದರಾಬಾದಿನ ವೈದ್ಯಕೀಯ ಶಾಲೆಯಲ್ಲಿ. ಆದರೆ, ಅವರು ಹೆಸರು ಗಳಿಸಿದ್ದು ಆಯುರ್ವೇದದಲ್ಲಿ. ಅಂದಿನ ತಲೆಮಾರಿನ ಜನ ಅವರನ್ನು `ಕರ್ನಾಟಕದ ಧನ್ವಂತರಿ’ ಎಂದು ಕರೆಯುತ್ತಿದ್ದರು. ಇದು ಅವರಿಗೆ ಆಯುರ್ವೇದದಲ್ಲಿ ಇದ್ದ ಪ್ರೌಢಿಮೆಯನ್ನು ಸೂಚಿಸುತ್ತದೆ. ತಾರಾನಾಥರು ಹೇಳುವಂತೆ ಅವರು ಆಯುರ್ವೇದ ವಿದ್ಯೆಯನ್ನು ಹೈದರಾಬಾದಿನ ಹಕೀಮ್ ಹರಿಗೋವಿಂದಜೀ ಕವಿರಾಜರಿಂದ ಪಡೆದಿದ್ದರು.
ತಾರಾನಾಥರನ್ನು ಆಯುರ್ವೇದ ವಿಶಾರದ ಭೀಷ್ಮಾಚಾರ್ಯರೆಂದೇ ಕರೆಯುತ್ತಿದ್ದರು. ಅವರು 1934ರಲ್ಲಿ ರಾಯಚೂರಿನಲ್ಲಿ ನಡೆದ ಪ್ರಥಮ ಅಖಿಲ ಕರ್ನಾಟಕ ಆಯುರ್ವೇದ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅದರಂತೆಯೇ ಪುಣೆಯಲ್ಲಿ ನಡೆದ ಬೊಂಬಾಯಿ ಪ್ರಾಂತೀಯ ಸಮ್ಮೇಳನದ (1938) ಅಧ್ಯಕ್ಷರಾಗಿದ್ದರು. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಆನುವಂಶಿಕ ವೈದ್ಯರ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಹಂತದಲ್ಲಿ ನಾವು ಗಮನಿಸಲೇಬೇಕಾದ ಒಂದು ಪ್ರಮುಖ ಅಂಶವೆಂದರೆ, ತಾರಾನಾಥರ ವಿಶಿಷ್ಟ ಚಿಕಿತ್ಸಾಕ್ರಮ. ಸೋಜಿಗದ ಸಂಗತಿ ಎಂದರೆ- ತಾರಾನಾಥರು ಮಂತ್ರ, ತಂತ್ರ, ಯೋಗ ವಿದ್ಯೆಯನ್ನು ತಮ್ಮ ಚಿಕಿತ್ಸಾಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದರು. ಇದರಿಂದಾಗಿ ಅವರ ಚಿಕಿತ್ಸಾಪದ್ಧತಿ ಭಾರತದಾದ್ಯಂತ ಪ್ರಸಿದ್ಧಿ ಪಡೆದು ವಿದೇಶೀಯರನ್ನೂ ಆಕರ್ಷಿಸಿತು.

Reviews

There are no reviews yet.

Be the first to review “ಸುಲಭ ಚಿಕಿತ್ಸೆ”

Your email address will not be published.