Description
ಅನ್ನಾ ಫ್ರಾಂಕ್ ದಿನಚರಿಯ ಪುಟಗಳು, 2ನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ನಾಝಿಗಳ ಕಣ್ತಪ್ಪಿಸಿ 8 ಜನರು ಒಂದೇ ಕುಟುಂಬದಂತೆ ಹಾಲೆಂಡಿನ ಒಂದು ರಹಸ್ಯ ಅನ್ನೆಕ್ಸಿನಲ್ಲಿ ಜೀವನ ಸಾಗಿಸಬೇಕೆನ್ನುವ ಅನಿವಾರ್ಯತೆಯನ್ನು ಬಣ್ಣಿಸುತ್ತದೆ. ಇಂತಹ ಸಂದರ್ಭದಲ್ಲಿ ನಾಝಿಗಳ ಕ್ರೂರವರ್ತನೆ, ಯಹೂದಿಗಳ ಬಂಧನ ಮತ್ತು ಉಸಿರುಕಟ್ಟುವಂತಹ ಬಿಕ್ಕಟ್ಟಿನ ವಾತಾವರಣದಲ್ಲಿ ಬದುಕನ್ನು ಸವೆಸಬೇಕಾಗುವ ಕ್ಷಣಗಳನ್ನು ಪುಟ್ಟ ಬಾಲಕಿಯು ಪ್ರಭುದ್ದತೆಯಿಂದ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾಳೆ. ಈ ದಿನಚರಿಯು ಒಬ್ಬ ಹದಿಹರೆಯದ ಹುಡುಗಿಯ ಮನಃಸ್ಥಿತಿ, ತುಮುಲ ಮತ್ತು ಭಾವನೆಗಳ ಪ್ರತೀಕವೆಂದರೆ ಅತಿಶಯೋಕ್ತಿಯಾಗಲಾರದು.
ಅನ್ನಾಗೆ 13ನೇ ಹುಟ್ಟುಹಬ್ಬದಂದು ಅವಳ ತಂದೆಯಿಂದ ಉಡುಗೊರೆಯಾಗಿ ದೊರೆತ ದಿನಚರಿಯಲ್ಲಿ ಬದುಕಿನಲ್ಲಿ ಕರಾಳದಿನಗಳಿಂದ ಶುರುವಾಗುವ ಅನುಭವಗಳನ್ನು ತನ್ನ ಕಥನದೊಂದಿಗೆ ಬೆರೆಸುತ್ತಾ ಬರೆಯುತ್ತಾಳೆ. ಬರೆಯುವ ಕಾಗದಕ್ಕಿರುವಷ್ಟು ತಾಳ್ಮೆ ಜನರಿಗಿರುವುದಿಲ್ಲ ಎಂಬ ಭಾವನೆ ಅವಳದ್ದು. ತನ್ನ ಸುನ್ನಿತ ಭಾವನೆಗಳನ್ನು ಹಂಚಿಕೊಳ್ಳಲು ನಿಜಗೆಳೆಯರ ಮತ್ತು ಒಂಟಿತನದ ಕೊರತೆ ನೀಗಿ…
Reviews
There are no reviews yet.