ತೌಲನಿಕ ಸಾಹಿತ್ಯ

100.00

Add to Wishlist
Add to Wishlist
Email

Description

ಸಿ.ಎನ್. ರಾಮಚಂದ್ರನ್

ಮೊದಲನೆಯ ಮುದ್ರಣ: 1998

ಪರಿಷ್ಕೃತ ಮೊದಲ ಮುದ್ರಣ: 2021

ಬೆಲೆ: 100.00 ಪುಟಗಳು: 100

ಪ್ರಕಾಶನ: ಅಭಿನವ, ಬೆಂಗಳೂರು

……………….

ತೌಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು (1998) ಎಂಬ ನನ್ನ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿತ್ತು. ಆಗ ಪ್ರಸಾರಾಂಗದ ನಿರ್ದೇಶಕರಾಗಿದ್ದವರು ಪ್ರಸಿದ್ಧ ಪ್ರಾಧ್ಯಾಪಕ-ಕವಿ-ಚಿಂತಕ ಡಾ. ಅರವಿಂದ ಮಾಲಗತ್ತಿಯವರು. ಆ ಸಂಕಲನಕ್ಕೆ ಕನ್ನಡದ ಪ್ರಸಿದ್ಧ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಲ್. ಎಸ್. ಶೇಷಗಿರಿ ರಾವ್ ಅವರು ದೀರ್ಘ ಮುನ್ನುಡಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದ್ದರು. ಡಾ. ಅರವಿಂದ ಮಾಲಗತ್ತಿ ಮತ್ತು ಡಾ. ಎಲ್. ಎಸ್. ಶೇಷರಿಗಿರಾವ್ ಅವರಿಗೆ ಆಭಾರಿಯಾಗಿದ್ದೇನೆ.

 ಆ ಸಂಕಲನದ ಮೊದಲ ಭಾಗದಲ್ಲಿ `ತೌಲನಿಕ ಅಧ್ಯಯನ’ ಕುರಿತ ಎರಡೋ ಮೂರೋ ಲೇಖನಗಳಿದ್ದವು. ಉಳಿದವು ಕೆಲವು ಪ್ರಸಿದ್ಧ ಲೇಖಕರ ಸಾಹಿತ್ಯಕ ಸಾಧನೆಯನ್ನು ಕುರಿತವು. ಈ ಪುಸ್ತಕದ ಶೀರ್ಷಿಕೆ ಗಮನಿಸಿದ ಹಲವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತೌಲನಿಕ ಸಾಹಿತ್ಯಕ್ಕೆ ಮೀಸಲಾದ ಪುಸ್ತಕವಿದೆಂದು ಭಾವಿಸಿದರು. ಯಾಕೋ ಹಲವು ವರ್ಷಗಳ ನಂತರವೂ ಈ ಪುಸ್ತಕ ಪುನರ್ ಮುದ್ರಣವಾಗಿರಲಿಲ್ಲ. ತೌಲನಿಕ ಅಧ್ಯಯನ ಕ್ಷೇತ್ರದಲ್ಲಿ ಪಠ್ಯಪೂರಕ ಕೃತಿಗಳ ಅಭಾವವಿದ್ದುದರಿಂದ ಅಭಿನವದ ರವಿಕುಮಾರ್ ಈ ಕೃತಿಯನ್ನು ಪರಿಷ್ಕರಿಸಿಕೊಡಲು ಕೋರಿದರು. ಅದರಂತೆ ನಾನು ಹಿಂದೆ ಬರೆದಿದ್ದ `ತೌಲನಿಕ ಅಧ್ಯಯನ’ದ ಮೊದಲನೆಯ ಮುದ್ರಣದಲ್ಲಿದ್ದ ಕೆಲವು ಲೇಖನಗಳನ್ನು ಉಳಿಸಿಕೊಂಡು, ಇತರೆಡೆಗಳಲ್ಲಿ ಪ್ರಕಟವಾಗಿದ್ದ `ತೌಲನಿಕ ಸಾಹಿತ್ಯ ಅಧ್ಯಯನ’ ಕುರಿತ ಆನ್ವಯಿಕ ಲೇಖನಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇನೆ.

-ಸಿ.ಎನ್. ರಾಮಚಂದ್ರನ್

(ಅರಿಕೆಯಿಂದ)

 

– See more at: https://abhinavabook.myinstamojo.com/product/3016581/comparative-literature/#sthash.MiiYU7MH.dpuf

Reviews

There are no reviews yet.

Be the first to review “ತೌಲನಿಕ ಸಾಹಿತ್ಯ”

Your email address will not be published.