Description
ಚನ್ನಕೇಶವ ಜಿ. ಅವರು ಚಿತ್ರಕಲೆ ಮತ್ತು ರಂಗಭೂಮಿಯ ಪದವೀಧರರು.ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಸ್ವತಃ ತಮ್ಮನ್ನು ತೊಡಗಿಸಿಕೊಂಡು, ಅಭಿನಯ, ನಿರ್ದೇಶನ, ನಾಟಕ ರಚನೆಯ ಜೊತೆಗೆ ಹವ್ಯಾಸಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಂಗ-ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದರು.
೨೦೦೩ರಲ್ಲಿ ಅಮೇರಿಕಾದ `ಬ್ರೆಡ್ ಆಂಡ್ ಪಪೆಟ್’ ಸಂಸ್ಥೆಯ ಎರಡು ತಿಂಗಳ ಕಾರ್ಯಾಗಾರಕ್ಕೆ ಭಾರತದಿಂದ ವಿಶೇಷ ಆಹ್ವಾನಿತರಾಗಿದ್ದರು. ೨೦೦೯ರಲ್ಲಿ ಬ್ರಿಟಿಷ್ ಕೌನ್ಸಿಲ್ ಏರ್ಪಡಿಸಿದ್ದ ಸ್ಕಾಟ್ಲ್ಯಾಂಡ್ನ ಎಡಿನ್ಬರೋದಲ್ಲಿ ನಡೆದ `ಥಿಯೇಟರ್ ಸೂತ್ರ’ ರಂಗ ಸಮ್ಮೇಳನಕ್ಕೆ ಭಾರತದ ಒಬ್ಬ ರಾಯಭಾರಿಯಾಗಿದ್ದರು. ೨೦೧೬ರಲ್ಲಿ ಅಮೇರಿಕಾದ ದಕ್ಷಿಣ ಕರೋಲಿನಾದ ವಿಶ್ವವಿದ್ಯಾಲಯದಲ್ಲಿ ನಡೆದ ಜಗತ್ತಿನಾದ್ಯಂತ ಚದುರಿರುವ ಆಫ್ರಿಕಾ ಜನಾಂಗದವರ `ಮಹಿಳಾ ಕಲಾ ಸಮ್ಮೇಳನ’ಕ್ಕೆ ಸಿದ್ದಿ ಜನಾಂಗದ ಪ್ರತಿನಿಧಿಯಾಗಿ, ಸಿದ್ದಿ ಕಲಾವಿದೆಯರೊಡನೆ ವಿಶೇಷ ಆಹ್ವಾನಿತರಾಗಿದ್ದರು.
ದೇಶಕಾಲ ಸಾಹಿತ್ಯ ಪತ್ರಿಕೆಯ ವಿನ್ಯಾಸಕರಾಗಿದ್ದ ಇವರು ೩೦೦ಕ್ಕೂ ಹೆಚ್ಚು ಪುಸ್ತಕ ವಿನ್ಯಾಸ ಮಾಡಿದ್ದಾರೆ. ಮಂಚೀಕೇರಿಯ `ಸಿದ್ದಿ ಟ್ರಸ್ಟ್’ ಮತ್ತು ಬೆಂಗಳೂರಿನ `ಲೋಕಚರಿತ ಟ್ರಸ್ಟ್’ ಇವುಗಳ ಸ್ಥಾಪಕ ಸದಸ್ಯರಾದ ಇವರು, ಸಿದ್ದಿ ಸಮುದಾಯದೊಟ್ಟಿಗೆ ಮತ್ತು ಬೆಂಗಳೂರಿನಲ್ಲಿ ಯುವ ಕಲಾಸಕ್ತ ವಿದ್ಯಾರ್ಥಿಗಳೊಡನೆ ಕಲಾ ಸಂಸ್ಕೃತಿಯನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು.
Reviews
There are no reviews yet.