ವೈದೇಹಿ ಕಥನ

110.00

Add to Wishlist
Add to Wishlist
Email

Description

ಕನ್ನಡದ ಅತಿ ಮುಖ್ಯ ಲೇಖಕಿಯರಲ್ಲಿ ಒಬ್ಬರಾದ ವೈದೇಹಿಯವರ ಸಮಗ್ರ ವಾಙ್ಮಯವನ್ನು ಆಪ್ತವಾಗಿ ಅವಲೋಕಿಸಿರುವ ಈ ಪುಸ್ತಕವು ಅವರ ಸಣ್ಣಕತೆ, ಕಾದಂಬರಿ, ಕಾವ್ಯ, ಜೀವನಕಥೆಗಳ ಸಂಗ್ರಹ ಮತ್ತು ಪ್ರಬಂಧಗಳ ಸ್ವರೂಪ, ಸಿದ್ಧಿ, ಸಾಧನೆ, ವೈಶಿಷ್ಠ್ಯಗಳನ್ನು ಸೂಕ್ಷ್ಮವಾಗಿ ನಿರೂಪಿಸುತ್ತದೆ. ಆಯಾ ಪ್ರಕಾರಗಳಿಗೆ ಸೇರಿದ ಪ್ರಾತಿನಿಧಿಕ ಬಿಡಿ ಕೃತಿಗಳ ಆಳವಾದ ವಿಶ್ಲೇಷಣೆ, ಅವುಗಳ ನಡುವೆ ಹೆಣೆದುಕೊಂಡಿರುವ ಅಂತರ್ ಪಠ್ಯೀಯ ಸಂಬಂಧಗಳ ಶೋಧ ಮತ್ತು ಅವುಗಳೆಲ್ಲ ಕೂಡಿ ಒಂದು ದರ್ಶನದತ್ತ ಚಲಿಸುವ ಪರಿಯ ಎಚ್ಚರದ ಗ್ರಹಿಕೆಗಳಿಂದಾಗಿ ಈ ಪುಸ್ತಕಕ್ಕೆ ಒಂದು ವಿಶೇಷವಾದ ತೋಲ, ಹದ ಲಭ್ಯವಾಗಿದೆ. ವೈದೇಹಿಯವರ ಕಥನಕಾರಣ ಮತ್ತು ಸ್ವಾರಸ್ಯಗಳನ್ನು ಲವಲವಿಕೆಯಿಂದ ತೆರೆದು ತೋರುವ ಟಿ.ಪಿ.ಅಶೋಕ ಅವರ ಈ ವಿಮರ್ಶಾ ಕಥನವು ಸಮಕಾಲೀನ ವಿಮರ್ಶೆಗೆ ಒಂದು ಅಪೂರ್ವ ಕೊಡುಗೆಯಾಗಿದೆ.

Reviews

There are no reviews yet.

Be the first to review “ವೈದೇಹಿ ಕಥನ”

Your email address will not be published.