Description
ಪೊರೆದೆತ್ತುವ ಕೈಯೆಲ್ಲವು ತಾಯಕ್ಕೆ – ಇದು ರಾಮು ನಿಲುವು. ಸಕಲ ಚರಾಚರಗಳ ಎಲ್ಲ ನಡೆಗಳಲ್ಲೂ, ಎಲ್ಲ ಬಗೆಯ ಸಂಬಂಧಗಳಲ್ಲೂ ಅವರು ಕಾಣುವುದು ಅಂತಿಮವಾಗಿ ಈ ಪೊರೆವ ತಾಯಪ್ರೀತಿಯನ್ನೇ. ಈ ನರಜನ್ಮವು ಹುಟ್ಟಿಸಿರುವ ಧರ್ಮ ಜಾತಿ ಸಿದ್ಧಾಂತ ಲೊಟ್ಟೆಲೊಸಗವೆಂಬ ಸಕಲಕಸವನ್ನೂ ಪ್ರೀತಿಯೆಂಬೊಂದು ತೊರೆಯಲ್ಲಿ ತೊಳೆಯುವ ಸಾಧ್ಯತೆ ಇರುವದನ್ನು ಕಿರುಚದೆ ಪ್ರತಿಪಾದಿಸುವ ಇಂಪಾದ ಹಾಡುಗಳು ಇವು.
-ಲಲಿತಾ ಸಿದ್ಧಬಸವಯ್ಯ
ಈ ಕೃತಿಯಲ್ಲಿರುವುದು ಘನವಾದ ಕಾವ್ಯ, ಕಾವ್ಯದ ಭಾಷೆಗೆ ತೆಕ್ಕೆಗೆ ಮಾತ್ರ ಎಟುಕುವ ಅನುಭವಗಳಿವೆ. ಅವು ಕಾವ್ಯವಾಗುತ್ತಲೇ ಅನುಭವವೂ ಆಗುತ್ತವೆ ಎಂಬ ನಂಬಿಕೆಯಿಂದ ಹುಟ್ಟಿರುವ ಕಾವ್ಯವಿದು. ಒಂದು ಪದವೂ ಅತಿಯಾಗದಂತೆ, ಭಾಷೆಯು ರೈಟರಿಕ್ ಆಗದಂತೆ ನಿರಾಳವೂ ಸಹಜವೂ ಆದ ಕಾವ್ಯದ ಭಾಷೆ ಇಲ್ಲಿದೆ. ಪ್ರತಿಮೆಗಳು ರೂಪಕಗಳು ಸಾಲು ಸಾಲಾಗಿ ನುಗ್ಗಿ ಬಂದರೂ ಅವುಗಳನ್ನು ಒಟ್ಟಂದಕ್ಕೆ ತರುವ ಕಸುವು ಈ ಕಾವ್ಯ ಭಾಷೆಗಿದೆ. ಇಲ್ಲಿನ ಕವನಗಳಲ್ಲಿ ಅದು ತಲಪಿರುವ ಹದವು ಅಚ್ಚರಿ ಹುಟ್ಟಿಸುವಂತಿದೆ.
-ರಾಜೇಂದ್ರ ಚೆನ್ನಿ
Reviews
There are no reviews yet.