Description
ಲೇಖಕರು: ಎಸ್.ಜಿ. ಸಿದ್ಧರಾಮಯ್ಯ
ಮೊದಲ ಮುದ್ರಣ: 2021
ಪುಟಗಳು: 624
ಪ್ರಕಾಶನ: ಬಹುರೂಪಿ
………………
ಬೆಳಕನ್ನು ಹಿಂಬಾಲಿಸಿದ ಕಥನ…
ಒಂದು ದೇಶದ ಸಂವಿಧಾನ ನಿಜಕ್ಕೂ ಅಂತಃಸತ್ವ ಇದ್ದರೆ ಸಮಾಜದಲ್ಲಿ ಎಂತಹ ಅದ್ಭುತಗಳು ಜರುಗಬಹುದು ಎನ್ನುವುದಕ್ಕೆ ಈ ಕಥನವೂ ಒಂದು ಸಾಕ್ಷಿ. ಕುರಿ ಕಾಯುತ್ತಾ, ಹೊಲದೊಳಗೆ ಮೊಳಕೆ ಉಸಿರು ಕಟ್ಟದಂತೆ ಇರಲು ಎಷ್ಟು ಮಾತ್ರ ಆಳ ಗೆರೆ ಹೊಡೆಯಬೇಕೆಂದು ಕಲಿಯುತ್ತಿದ್ದ ಹುಡುಗನೊಬ್ಬ ಶಿಕ್ಷಣವೇ ನನ್ನ ಶಕ್ತಿ ಎನ್ನುವುದನ್ನು ಅರಿತುಕೊಂಡು ಸಮಾಜದಲ್ಲಿ ಆ ಬೆಳಕನ್ನೇ ಹಿಂಬಾಲಿಸಿದ ಕಥನ ಇದು.
‘ಯರೆಬೇವು’ ಎನ್ನುವುದು ದಡ್ಡತನಕ್ಕೆ ಇರುವ ರೂಪಕ. ಊರಿನ ಹಲವರಿಂದ ದಡ್ಡ ಎಂದೇ ಕರೆಸಿಕೊಳ್ಳುತ್ತಿದ್ದ ಹುಡುಗ ಯಾವಾಗ ಶಾಲೆಯ ಸ್ಪರ್ಶ ಸಿಕ್ಕಿತೋ ನೋಡನೋಡುತ್ತಾ ಊರವರೇ ನಿಬ್ಬೆರಗಾಗುವಂತೆ ಬೆಳೆದು ‘ಲಚ್ಚರರ್’ ಆಗಿ ತನ್ನ ಸಮಾಜದ ಒಳಗೆ ಒಂದು ಬದಲಾವಣೆಯ ಬೆಳಕು ಮೂಡಲು ಕಾರಣನಾಗುತ್ತಾ ಹೋದ ಕಥನವೂ ಹೌದು.
-ಜಿ ಎನ್ ಮೋಹನ್
(ಬೆನ್ನುಡಿಯಿಂದ)
– See more at: https://amulyapustaka.myinstamojo.com/-f0537/p3057941/#sthash.vR1985Yf.dpuf
Reviews
There are no reviews yet.