Description
ಯುಗಾಂತ ಭಾರತೀಯ ಗ್ರಂಥಗಳಲ್ಲಿಯೇ ಕ್ಲಾಸಿಕ್ ಎಂದು ನಾನು ತಿಳಿದಿದ್ದೇನೆ. ಇದು ಮಹಾಭಾರತದ ತರ್ಕಬದ್ಧ ನಿರಚನೆ ಮಾತ್ರವಲ್ಲ. ಮಹಾಭಾರತದ ಮಾಂತ್ರಿಕ ಶಕ್ತಿ ಕಳೆದು ಹೋಗದಂತೆ ಇರಾವತಿ ಕರ್ವೆ ಅವರು ಈ ಕೃತಿಯನ್ನು ರಚಿಸಿದ್ದಾರೆ. ವ್ಯಾಸರ ಮಹಾಭಾರತವನ್ನು ಅದರ ಉದ್ದಗಲಗಳಲ್ಲಿ ಸಂಚರಿಸಿ, ಪರಸ್ಪರ ಸಂಬಂಧಗಳನ್ನು ಗುರುತಿಸಿ ಕರತಲಾಮಲಕ ಮಾಡಿಕೊಂಡು ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುವ ಮಹಾಭಾರತವನ್ನು ಸೃಷ್ಟಿಸಿದ್ದಾರೆ. ಇನ್ನೂ ಭೇದಿಸಬೇಕಾದ ರಹಸ್ಯಗಳು ಮಹಾಭಾರತದಲ್ಲಿವೆ ಎನ್ನುವ ವಿನಯ ಈ ಕೃತಿಯ ಉದ್ದಕ್ಕೂ ಕಾಣುತ್ತದೆ. ಇದು ನಮ್ಮಲ್ಲಿ ಪರಿಚಿತವಾದ ನಿರಚನೆ ಅಲ್ಲ; ಅನುಭವದಿಂದ ಹುಟ್ಟಿಬರುವ ಸಂರಚನೆ. ಈ ಪುಸ್ತಕವನ್ನು ಓದಿದವರು ಮಹಾಭಾರತದ ಮತ್ತಷ್ಟು ಶ್ರೀಮಂತ ಪಠ್ಯವನ್ನು ಓದಿದ ಅನುಭವ ಪಡೆಯುತ್ತಾರೆ. ಹೀಗೆ ಯುಗಾಂತ ಒಂದು ಕನ್ನಡಿಯೂ ಹೌದು ದೀಪವೂ ಹೌದು. ಆಶ್ಚರ್ಯವೆಂದರೆ ನಮ್ಮ ಕಾಲಕ್ಕೂ ಕನ್ನಡಿ ಮತ್ತು ದೀಪದಂತೆ ಮಹಾಭಾರತವನ್ನು ಬೆಳಸುವ ಕೃತಿ.
Reviews
There are no reviews yet.