Description
ನಮ್ಮ ಕಾಲದಲ್ಲಿ ತನಗೆ ಹೇಳಬೇಕಾದದ್ದನ್ನು ಹೇಳಬೇಕಾದ ರೀತಿಯಲ್ಲಿ ಬೇರೆಯವರಿಗೆ ಕೇಳುವ ಹಾಗೆ ಹೇಳಬಲ್ಲವರು ಅನಂತಮೂರ್ತಿಯವರು ಕಾದಂಬರಿ ಕಾವ್ಯ ಕಥೆ ವಿಮರ್ಶೆ ಚಿಂತನೆ ಮಾತು ಯಾವುದೇ ಇರಲಿ ಅವರ ಬರವಣಿಗೆ ಅವರೇ ಸ್ಪಟಿಕ ಸ್ಪರ್ಶ, ಕಾಮನಬಿಲ್ಲಿನ ಬಣ್ಣ ಜೊತೆಗೆ ಸೂರ್ಯ ಸ್ಪಷ್ಟ ನಿಖರತೆಯನ್ನು ನಾವು ಕಾಣಬಹುದಾಗಿದೆ. ಬೇಂದ್ರೆಯವರ ವ್ಯಕ್ತಿ ಮತ್ತು ಶಕ್ತಿಯನ್ನು ಗುರುತಾಗಿ ಕಾಣುವ ಮತ್ತು ಕಾಣಿಸುವ ಪ್ರಯತ್ನವನ್ನು ಅನಂತಮೂರ್ತಿಯವರು ಮಾಡಿದ್ದಾರೆ.ಅವರದೇ ಮಾತುಗಳಲ್ಲಿ ಹೇಳಬೇಕಾದರೆ ಕಾವ್ಯದ ಸೃಜನಶೀಲತೆಯ ಸ್ವರೂಪ ಅವರ ವೆಗಿ, ಅದರ ಸ್ಪರ್ಶ ಅವರು ತರುವ ವಿಶಾಲತೆಯ ಸುಖ, ಪ್ರೇಮಕ್ಕೂ ಅದಕ್ಕೆ ಇರುವ ನಂಟು,
ಅದರ ಮಣ್ಣನ್ನು ಮಾತ್ರ ಗರ್ಭೀಕರಿಸಿಕೊಳ್ಳುವ ಅವಕಾಶ ಇವನ್ನೆಲ್ಲ ತೀವ್ರವಾಗಿ ಅನುಭವಿಸಿದ್ದ ನಮ್ಮ ಕಾಲದ ಬಹುದೊಡ್ಡ ಕವಿ ಎಂದರೆ ಅದು ಬೇಂದ್ರೆಯವರು.
Reviews
There are no reviews yet.