Description
`ಯುಗಧರ್ಮ ಹಾಗೂ ಸಾಹಿತ್ಯ ದರ್ಶನ` ಹೊಸಗನ್ನಡದ ವಿಮರ್ಶಾಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ಕೃತಿ. ಹೊಸಗನ್ನಡದಲ್ಲಿ ವಿಮರ್ಶೆಯ ಹೊಸ ಅಧ್ಯಾಯವನ್ನೇ ಆರಂಭಿಸಿದ ಈ ಕೃತಿ ಅಂದಿನ ಸಾಹಿತ್ಯಲೋಕದಲ್ಲಿ ಒಂದು ಬಗೆಯ ಸಂಚಲನವನ್ನೇ ಉಂಟು ಮಾಡಿತು. ಪ್ರಿಯವಾದದ್ದನ್ನು ಹೇಳಬೇಕು; ಸತ್ಯವನ್ನು ಹೇಳಬೇಕು. ಅಪ್ರಿಯವಾದ ಸತ್ಯವನ್ನು ಎಂದೂ ಹೇಳಬಾರದು ಎಂಬ ಸೂತ್ರಕ್ಕೆ ಕಟ್ಟುಬಿದ್ದ ಪಂಡಿತರು, ದಾಕ್ಷಿಣ್ಯಕ್ಕೆ ಒಳಗಾಗಿ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳುವದೇ ವಿಮರ್ಶೆ ಎಂಬು ಭಾವಿಸಿದವರು ಇದ್ದಂಥ ಸಂದರ್ಭದಲ್ಲಿ ಬಂದ ಈ ಕೃತಿ ಅನೇಕ ಜನರ ಮೆಚ್ಚಿಕೆಗೆ ಪಾತ್ರವಾಯಿತು; ಹಲವರ ಅಸಮಾಧಾನ, ಆಕ್ರೋಶಗಳಿಗೂ ಗುರಿಯಾಯಿತು. ಈ ಗ್ರಂಥದಲ್ಲಿ ಕೀರ್ತಿನಾಥ ಕುರ್ತಕೋಟಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು, ಸಾಹಿತಿಗಳ ಬಗೆಗಿನ ತೀರ್ಮಾನಗಲನ್ನು, ಎಲ್ಲರೂ ಒಪ್ಪಲೇಬೇಕೆಂದೇನೂ ಅಲ್ಲ. ಆದರೆ ಆ ಮೂಲಕ ಗಂಭೀರವಾದ ಚರ್ಚೆ, ಸಂವಾದಗಳಿಗೆ ಅವಕಾಶ ದೊರೆತಂತಾಯಿತು.
Reviews
There are no reviews yet.