ಯಂಕ್ ಪೋಸ್ಟ್

140.00

Add to Wishlist
Add to Wishlist
Email
SKU: B-MGM-YNP Category:

Description

ಅನುಭವ ಮತ್ತು ಅದರ ಗ್ರಹಿಕೆಯ ನಡುವಿನ ಪ್ರಕ್ಷುಬ್ಧ ಅವಕಾಶದಲ್ಲಿ ಇಲ್ಲಿಯ ಕತೆಗಳು ಮೈದಳೆದಿವೆ. ಖಾಸಗಿ ಭಾವನೆ, ಸಂಬಂಧಗಳ ಸಾರ್ವಜನಿಕ ಪ್ರದರ್ಶನದ ಅಶ್ಲೀಲತೆಯು ಸಹಜವಾಗಿ ಕಾಣುತ್ತಿರುವ ಇಂದಿನ ಕಾಲದಲ್ಲಿ, ತಂತ್ರಜ್ಞಾನದ ಬೆಳವಣಿಗೆಗಳಿಂದ ಇಂದ್ರಿಯಗಮ್ಯತೆಯು ಸಂಶಯಾಸ್ಪದವಾಗಿರುವ ಸಮಯದಲ್ಲಿ, ವಿಘಟಿತ ಅನುಭವಗಳ ಅಮೂರ್ತತೆ, ಅಸಂಗತತೆಯನ್ನು ಅರಿಯುವ ಅಸಾಮಾನ್ಯ ಕೆಲಸವನ್ನು ಕೈಗೆತ್ತಿಕೊಂಡಿರುವುದು ಶ್ರೀದೇವಿಯವರ ಕಥೆಗಳ ಬಹುಮುಖ್ಯ ಸಾಧನೆಯಾಗಿದೆ.

ಆಧುನಿಕ ಸ್ತ್ರೀ ಸಂವೇದನೆಯಿಂದ ರೂಪಗೊಂಡ ಅವರ ಜೀವನದೃಷ್ಟಿಯು ಎಲ್ಲ ಮಾರ್ಗ, ವಾದ, ಪಂಥಗಳ ಸರಹದ್ದುಗಳನ್ನು ಅರಗಿಸಿಕೊಂಡು ಮನುಷ್ಯನ ಪಾಡೊಂದನ್ನೇ ಹೃದಯದಲ್ಲಿರಿಸಿಕೊಂಡಿದೆ. ಸನ್ನಿವೇಶದ ವಿವರಗಳಿಗೆ ಕೊಡುವ ಗಮನ, ಪಾತ್ರಗಳ ಅಂತರಂಗವನ್ನು ಕಾಣಿಸುವಲ್ಲಿ ತೋರುವ ಶ್ರದ್ಧೆ, ವೈರುಧ್ಯಗಳನ್ನು ಕಣ್ಣಿಟ್ಟು ನೋಡುವ ಎದೆಗಾರಿಕೆ ಮತ್ತು ಅವ್ಯಕ್ತವನ್ನು ಸೂಚಿಸುವಲ್ಲಿ ತೋರುವ ಆತ್ಮವಿಶ್ವಾಸ – ಎಲ್ಲವೂ ಸಶಕ್ತ ಕಲೆಗಾರಿಕೆಯ ದ್ಯೋತಕವಾಗಿವೆ.

– ವಿವೇಕ ಶಾನಭಾಗ

Reviews

There are no reviews yet.

Be the first to review “ಯಂಕ್ ಪೋಸ್ಟ್”

Your email address will not be published.