Description
ಇಸ್ರೇಲ್ ದೇಶವು ಫೆಲಸ್ತೀನರ ಮೇಲೆ ನಡೆಸುವ ಕ್ರೂರತೆಯನ್ನು ಕಂಡಿಲ್ಲವೆಂದು ನಟಿಸುವುದೋ, ಅಡಗಿಸಿಡುವುದೋ ಮಾಡುವವರಿಗೆ ನೇರ ಸೂಚಕಾ ವಸ್ತುವೇ ಡಾ. ಆಂಗ್ ಸ್ವೀ ಛಾಯ್ ಅವರು ಬರೆದ ‘From Beirut to Jerusalem’. ಈ ಪುಸ್ತಕವನ್ನು ‘ಬೈರೂತಿನಿಂದ ಜೆರುಸಲಂಗೆ’ ಎಂಬ ಹೆಸರಿನಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿಯವರು ಬಹಳ ಚಂದವಾಗಿ ಕನ್ನಡೀಕರಿಸಿದ್ದಾರೆ.ಫೆಲಸ್ತೀನ್ ಕುರಿತ ಓದುವಿಕೆಯಲ್ಲಿ ಪ್ರಮುಖವಾದ ಗ್ರಂಥವಿದು. ತಿರಸ್ಕ್ರತವಾದ ಒಂದು ಜನತೆ ಅಸಾಹಯಕತೆಯ ನಡುವೆ ಸಿಲುಕಿ ಅನುಭವಿಸುವ ‘ನೋವಿನ ಅನುಭವ’ಗಳನ್ನು ಸಾಕ್ಷಿಯಾರಿಸಿ ಬರೆದ ಗ್ರಂಥವಿದು. ಪ್ರತಿಯೊಂದು ಗೆರೆಯಲ್ಲೂ ಫೆಲಸ್ತೀನಿನ ನೋವು ಎಷ್ಟು ತೀವ್ರತೆಯನ್ನು ನೀಡುತ್ತದೆಯೆಂದು ಓದುಗನಿಗೆ ಓದುತ್ತಾ ಹೋದಂತೆ ಮನದಟ್ಟಾಗುತ್ತದೆ.
Reviews
There are no reviews yet.