Description
ಕಣ್ಣಿಗೆ ಕಾಣದ ಲೋಕದ ಅನಭಿಷಿಕ್ತ ದೊರೆಗಳ ಸ್ವಾರಸ್ಯಕರ ವೃತ್ತಾಂತವನ್ನು ಹೇಳುವ ಪುಸ್ತಕ ಈಗ ನಿಮ್ಮ ಕೈಯಲ್ಲಿದೆ. ಸೂಕ್ಷ್ಮಾತಿಸೂಕ್ಷ್ಮ ಜೀವಿಗಳಿಂದ ಬೃಹತ್ ತಿಮಿಂಗಲವರೆಗೆ ಎಲ್ಲವನ್ನೂ ತಾಕುವ, ಅತ್ತ ಜೀವವೂ ಅಲ್ಲದ, ಇತ್ತ ನಿರ್ಜೀವವೂ ಅಲ್ಲದ ವೈರಸ್ಸುಗಳ ವೃತ್ತಾಂತ ಇದು. ಹೂವಿನ ಬಣ್ಣ, ಬೆಳೆಗಳ ರೋಗಗಳು, ನೆಗಡಿ, ಕ್ಯಾನ್ಸರುಗಳಲ್ಲದೆ ಗಂಗಾ ನದಿಯ ರೋಗ ನಿವಾರಕ ಗುಣಕ್ಕೂ ವೈರಸ್ಸುಗಳು ಕಾರಣ ಎಂಬುದು ಗೊತ್ತೇ? ಕಾಣದ ಪ್ರಪಂಚ: ವೈರಸ್ ವೃತ್ತಾಂತ ಇಂತಹ ಅತ್ಯಂತ ಸ್ವಾರಸ್ಯಕರ ಸಂಗತಿಗಳನ್ನು ನಮ್ಮೆದುರು ತೆರೆದಿಡುತ್ತಲೇ ಈ ವಿಚಿತ್ರ ಜೀವಿಗಳ ಬಗ್ಗೆ ನಡೆದ ಸಂಶೋಧನೆಗಳ ಚರಿತ್ರೆಯನ್ನೂ ಮನದಟ್ಟು ಮಾಡಿಕೊಡುತ್ತದೆ. ಇದು ವೃತ್ತಾಂತವಲ್ಲ, ವೈರಸ್ಸುಗಳ ಕಥೆ.
Reviews
There are no reviews yet.