ಸಿಲ್ವರ್ ಲೇಕ್ ದಡದಲ್ಲಿ -ಲಾರಾ ಇಂಗಲ್ಸ್ ವೈಲ್ಡರ್ ಪುಟ್ಟ ಮನೆ ಸರಣಿ 5

170.00

Add to Wishlist
Add to Wishlist
Email
SKU: B-ANK- SLD Category:

Description

ಲಾರಾ ಇಂಗಲ್ಸ್ ವೈಲ್ಡರ್ – ಪುಟ್ಟ ಮನೆ ಸರಣಿ 5

ಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ವಿಸ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ನೈಜ ಹಿನ್ನೆಲೆ, ಸೂಕ್ಷ್ಮವೇದಿಯಾದ ಚಿತ್ರಣ, ಸತ್ಯಪ್ರಿಯತೆ ಮತ್ತು ಸಮರ್ಥ ಸ್ವಾತಂತ್ರ್ಯಪ್ರಿಯತೆ ಈ ಗುಣಗಳೆಲ್ಲ ಇರುವ ಈ ಕಾದಂಬರಿಗಳು ಅಮೇರಿಕನ್ ಕಾದಂಬರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಕಾರಣವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. ಅಮೇರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್‌ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.

Reviews

There are no reviews yet.

Be the first to review “ಸಿಲ್ವರ್ ಲೇಕ್ ದಡದಲ್ಲಿ -ಲಾರಾ ಇಂಗಲ್ಸ್ ವೈಲ್ಡರ್ ಪುಟ್ಟ ಮನೆ ಸರಣಿ 5”

Your email address will not be published.