Sale!

ಭಾರತವೆಂಬ ಪರಿಕಲ್ಪನೆ

70.00

Add to Wishlist
Add to Wishlist
Email

Description

ಹತ್ತಾರು ಚಿಂತನಾರ್ಹ ವಿಚಾರಗಳನ್ನು ಒಳಗೊಂಡಿರುವ ಈ ಅರ್ಥಪೂರ್ಣ ಸಂಭಾಷಣೆಯಲ್ಲಿ, ಹಳೆಯ ಗೆಳತಿಯರಿಬ್ಬರು ಭಾರತವೆಂಬ ಪರಿಕಲ್ಪನೆಯ ಇತಿಹಾಸವನ್ನು ಹಲವು ಚಾರಿತ್ರಿಕ ತಿರುವುಗಳು, ಉಪಾಖ್ಯಾನಗಳು ಮತ್ತು ಅವಲೋಕನಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಈ ನೆಲದ ಬಗ್ಗೆ ಅಪಾರ ಕನಸು, ದೂರದೃಷ್ಟಿಗಳನ್ನು ಹೊಂದಿದ್ದ, ಆದರೆ ದನಿಯಾಗದ ಜನರ ಕನಸುಗಳು ಮತ್ತು ಮಾತುಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಾ, ಭಾರತೀಯತೆಯೆಂಬ ಅಸ್ಮಿತೆಯು ಬೆಳೆದುಬಂದ ಪರಿಯನ್ನು ಪ್ರಸ್ತುತಪಡಿಸುವುದೇ ಈ ಸಂಭಾಷಣೆಯ
ಕೇಂದ್ರಬಿಂದು.

ಸಂಸ್ಕೃತಿಗಳು ತಮ್ಮನ್ನು ತಾವು ವ್ಯಾಖ್ಯಾನಿಸಲು ಮತ್ತು ಪ್ರತಿಪಾದಿಸಲು ಪ್ರಯತ್ನಿಸಿದ ಸಂದರ್ಭಗಳಲ್ಲೆಲ್ಲಾ ಸವಾಲಾಗಿ ಬಂದ ಮೂಲಭೂತವಾದ ಮತ್ತು ಬಹಿಷ್ಕರಿಸುವ ಪ್ರವೃತ್ತಿಗಳ ಬಗ್ಗೆ ಇತಿಹಾಸಕಾರರಾದ ರೋಮಿಲಾ ಥಾಪರ್ ಮತ್ತು ಖ್ಯಾತ ಥಿಯರಿಸ್ಟ್ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಈ ಚರ್ಚೆಯಲ್ಲಿ ಬೆಳಕು ಚೆಲ್ಲಿದ್ದಾರೆ. ಜೊತೆಗೇ ಸರ್ವರನ್ನೂ ಒಳಗೊಳ್ಳುವಿಕೆಯ ಮನೋಭಾವವನ್ನು ಸಮರ್ಥವಾಗಿ ಮೂಡಿಸುವ ನಿಟ್ಟಿನಲ್ಲಿ ಮತ್ತು ಈ ದೇಶದ ಸಂಕೀರ್ಣ ಇತಿಹಾಸವನ್ನು ಸರಿಯಾಗಿ ಅರ್ಥೈಸುವಲ್ಲಿ ಶೈಕ್ಷಣಿಕ ವ್ಯವಸ್ಥೆಯ ಮಹತ್ತರ ಪಾತ್ರದ ಬಗ್ಗೆಯೂ ಇವರಿಬ್ಬರು ಅರ್ಥಪೂರ್ಣವಾಗಿ ಮಾತಾಡಿದ್ದಾರೆ.

Reviews

There are no reviews yet.

Be the first to review “ಭಾರತವೆಂಬ ಪರಿಕಲ್ಪನೆ”

Your email address will not be published.