Sale!

ಸಹಸ್ಪಂದನ-ಸಂಗೀತವನ್ನು ಕುರಿತ ಟಿ.ಎಂ. ಕೃಷ್ಣ ಅವರ ಲೇಖನಗಳು

205.00

Add to Wishlist
Add to Wishlist
Email
SKU: B-RGM-STM Category:

Description

ವಿದ್ವಾನ್ ಟಿ ಎಂ ಕೃಷ್ಣ ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಚಿರಪರಿಚಿತರು. ಸಂಗೀತದ ಪ್ರಸ್ತುತಿಯಲ್ಲಿ ತಮ್ಮದೇ ಜಾಡನ್ನು ಕಂಡುಕೊಂಡವರು. ಇವರ ಸಂಗೀತ ನಿರೂಪಣೆ ಸಾಂಪ್ರದಾಯಿಕವೇ ಆದರೂ ಅದರಲ್ಲಿ ಅಚ್ಚರಿಯಾಗುವಷ್ಟು ಹೊಸತನವಿದೆ. ತಮ್ಮ ಸಂಗೀತದ ಮೂಲಕ ರಸಿಕರನ್ನು ಮೋಡಿಗೊಳಿಸುವುದಕ್ಕೆ ಮಾತ್ರ ಇವರ ಖ್ಯಾತಿ ಸೀಮಿತವಾಗಿಲ್ಲ, ಮನಸ್ಸು ಬಿಚ್ಚಿ ಮಾತನಾಡುವುದಕ್ಕೂ ಇವರು ಪ್ರಸಿದ್ಧರು. ಇವರ ಬರವಣಿಗೆ ತೀರಾ ಮೊನಚು. ಬಹುಶಃ ನೈತಿಕ ಆಕ್ರೋಶವಿಲ್ಲದೇ ಹೋದಲ್ಲಿ ಸ್ಥಗಿತವಾಗಿರುವ ಸಮಾಜದಲ್ಲಿ ಯಾವುದೇ ಚಲನೆಯು ಸಾಧ್ಯವಿಲ್ಲ ಅನ್ನಿಸುತ್ತದೆ. ಸಂಗೀತ ಎನ್ನುವುದು ಇವರಿಗೆ ಬದುಕನ್ನು ಅರ್ಥಮಾಡಿಕೊಳ್ಳುವ ಕ್ರಮ. ತಮ್ಮ ಬರಹಗಳ ಮೂಲಕ ಕರ್ನಾಟಕ ಸಂಗೀತದ ಹಿಂದಿರುವ ದರ್ಶನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಂಗೀತದ ಕಲಾತ್ಮಕತೆಯ ಬಗ್ಗೆ ಗಂಭೀರವಾಗಿ ಬರೆಯುತ್ತಿದ್ದಾರೆ. ಇವರ ಆಲೋಚನೆ ಕೇವಲ ಸಂಗೀತಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್, ರಾಜಕೀಯ, ಸಿನಿಮಾ,… . . . ಹೀಗೆ ಇವರ ಆಸಕ್ತಿಯ ವಿಷಯಗಳು ಹಲವು. ಕೃಷ್ಣ ಅವರ ಸಂಗೀತವನ್ನು ಕುರಿತ ಕೆಲವು ಲೇಖನಗಳನ್ನು ಇಲ್ಲಿ ಸಂಗ್ರಹಿಸಿ, ಅನುವಾದಿಸಿ ಕೊಡಲಾಗಿದೆ

Reviews

There are no reviews yet.

Be the first to review “ಸಹಸ್ಪಂದನ-ಸಂಗೀತವನ್ನು ಕುರಿತ ಟಿ.ಎಂ. ಕೃಷ್ಣ ಅವರ ಲೇಖನಗಳು”

Your email address will not be published.