ಮರಳಿ ಮನೆಗೆ

125.00

Add to Wishlist
Add to Wishlist
Email

Description

ನಾವೆಲ್ಲರೂ ಸೇರಿ ನಮ್ಮದೇ ಆದ ಒಂದು ಶಾಲೆಯನ್ನು ಆರಂಭಿಸಿದರೆ ಹೇಗೆ? ತೂಗುತ್ತಿರುವ ತಾಳೆ ಮರಗಳು, ಫಲವತ್ತಾದ ತೋಟ ಹಾಗೂ ಸಿಹಿನೀರ ಕೊಳಗಳನ್ನು ಹೊತ್ತಿರುವ ಕಣಿವೆಯಲ್ಲಿ 11 ವರ್ಷದ ಸೆಲ್ವನ ಮನೆಯಿದೆ. ಅದೊಂದು ಸ್ವರ್ಗ. ಆದರೆ, ಅವನು ಹಾಗೂ ಅವನ ಗೆಳೆಯರು ಓದನ್ನು ಮುಂದುವರಿಸಬೇಕು ಎಂದರೆ ದಟ್ಟಾರಣ್ಯದಲ್ಲಿ ನಡೆಯುತ್ತಾ ಸರ್ಕಾರಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ತನ್ನ ಅಣ್ಣ ಸುಬ್ಬು ಸೇರಿದಂತೆ ತನ್ನ ಊರಿನ ಎಲ್ಲ ಮಕ್ಕಳಂತೆ, ತಾನೂ ಸಹಾ ಓದನ್ನು ಕೈಬಿಟ್ಟು ಕೆಲವೇ ವರ್ಷಗಳಲ್ಲಿ ವಲಸೆ ಹೋಗಬೇಕಾಗಿ ಬರುತ್ತದೆ ಎಂದು ಸೆಲ್ವ ಆತಂಕಗೊಂಡಿದ್ದಾನೆ.

ಓದು ನಿಲ್ಲಿಸಿ, ಊರು ತೊರೆದು, ದೂರದೂರದ ಗಿರಣಿಗಳ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಹುಡುಕಿಕೊಂಡು ಹೋಗಲು ಆತನಿಗೆ ಸ್ವಲ್ಪವೂ ಇಷ್ಟವಿಲ್ಲ – ಹಾಗಾಗಿ ಆತ ಸರಳ ಪ್ರಶ್ನೆಯೊಂದನ್ನು ಕೇಳಿಕೊಳ್ಳುತ್ತಿದ್ದಾನೆ ‘ನಾವು ನಮ್ಮದೇ ಶಾಲೆ ಆರಂಭಿಸಿದರೆ ಹೇಗೆ??

ಈ ಕೃತಿಯಲ್ಲಿ ಪ್ರೀತಿ ಡೇವಿಡ್ ಅವರು ತಾವು ಪ್ರೀತಿಸುವ ಜನರನ್ನು ಮತ್ತೆ ತಮ್ಮ ತವರಿಗೆ ಕರೆತರುವ ನಿಟ್ಟಿನಲ್ಲಿ ಇರುವ ಅವಕಾಶಗಳನ್ನು ಶೋಧಿಸುತ್ತಿರುವ ಸಮರ್ಪಣಾ ಮನೋಭಾವದ, ಬುದ್ಧಿವಂತ ಹಾಗೂ ಮಹತ್ವಾಕಾಂಕ್ಷೆಯ ಮಕ್ಕಳು ನೆಲೆಸಿರುವ ಧರ್ಮಪುರಿಯ ನಯನಮನೋಹರ ಸಿತ್ತಿಲಿಂಗಿ ಕಣಿವೆಯ ಕಥಾಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ.

Reviews

There are no reviews yet.

Be the first to review “ಮರಳಿ ಮನೆಗೆ”

Your email address will not be published.