Description
ಉದ್ಯೋಗದ ಹುಡುಕಾಟದಲ್ಲಿರುವ ಚಂದ್ರಶೇಖರ ತಾನು ಪ್ರೀತಿಸುತ್ತಿರುವ ಸಹಪಾಠಿಯನ್ನೇ ಮದುವೆಯಾಗಿ ಮನೆಗೆ ಹಿಂದಿರುಗಬೇಕೆಂಬ ಕನಸು ಹೊತ್ತಿದ್ದಾನೆ. ಅರುಣ ತನ್ನ ಚಪ್ಪಲಿಯನ್ನು ಕಳೆದುಕೊಂಡಿದ್ದಾಳೆ. ಅವಳ ಬಳಿ ಇದ್ದದ್ದು ಅದೊಂದೇ ಜೊತೆ ಚಪ್ಪಲಿ. ಒಂದು ಕವನ ಸಂಕಲನ ಕೊಳ್ಳಲು ತನ್ನ ಬಳಿ ಇರುವ ಸುತ್ತಿಗೆಯನ್ನೇ ಮಾರಲು ಬಾಲು ಸಿದ್ಧನಿದ್ದಾನೆ. ತಮ್ಮ ಮುಂದಿನ ಬದುಕೇನು ಎಂದು ಯೋಚಿಸುತ್ತಾ ಸಾದಿಯಾ ಮತ್ತು ಆಕೆಯ ಮಗ ತಾವೇ ತಯಾರು ಮಾಡಿದ ಗೊಂಬೆಗಳ ಪಕ್ಕ ಮಲಗಿದ್ದಾರೆ. ನಿರಂತರವಾಗಿ ಕಚ್ಚುತ್ತಿರುವ ಸೊಳ್ಳೆಗಳ ದಾಳಿಯನ್ನು ಮರೆಯಲು ಅಂಜನಮ್ಮ ಒಂದು ಕಥೆ ಕಟ್ಟಿ ಹೇಳಿಕೊಳ್ಳುತ್ತಿದ್ದಾಳೆ. ನಾಗರಾಜು ದೃಷ್ಟಿಹೀನನಾದರೂ ರೈಲು ನಿಲ್ದಾಣಗಳ ಗೊಂದಲ ಗೋಜಲುಗಳ ನಡುವೆ ದಾರಿಯನ್ನು ಹುಡುಕಿಕೊಳ್ಳುತ್ತಾನೆ.
ಕೆಲಸ, ಅಸ್ತಿತ್ವ ಹಾಗೂ ಉಳಿವಿಗಾಗಿ ಆಂಧ್ರಪ್ರದೇಶದಿಂದ ಕೊಚ್ಚಿಗೆ ವಲಸೆ ಹೊರಟಿರುವವರ ಆರು ಅನಿಶ್ಚಿತ ಪಯಣದ ಕಥೆಗಳನ್ನು ಸುಬೂಹಿ ಜಿವಾನಿ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ
Reviews
There are no reviews yet.