Sale!

ಭಾರತದಲ್ಲಿ ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ

297.00

Add to Wishlist
Add to Wishlist
Email
SKU: B-RUT-USE Category:

Description

ಜಗತ್ತಿನ ಕೆಲ ಭಾಗಗಳಲ್ಲಿರುವ ಜನರ ಜೀವನಮಟ್ಟವು ಇತರ ಭಾಗಗಳಲ್ಲಿನ ಜನರ ಜೀವನಮಟ್ಟಕ್ಕಿಂತ ಹೆಚ್ಚು ಉತ್ತಮವಾಗಿರುವುದು ಏಕೆ? ಜಗತ್ತಿನ ಕೆಲವು ಪ್ರದೇಶಗಳು ಇತರ ಪ್ರದೇಶಗಳಿಗಿಂತ ಹೆಚ್ಚು ಏಳಿಗೆ ಹೊಂದಲು ಏನು ಕಾರಣ? ಪ್ರತಿಯೊಂದು ದೇಶದ ಏಳಿಗೆಯು ಬೇರೆ ಬೇರೆ ಹಂತದಲ್ಲಿರಲು ಕಾರಣಗಳೇನು? ಸಮಾಜ ವಿಜ್ಞಾನಿಗಳು ಮತ್ತು ನೀತಿ ನಿರೂಪಕರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ತುಂಬಾ ಅಗತ್ಯ. ಏಕೆಂದರೆ, ಮುಂದುವರಿದ ಪ್ರದೇಶಗಳೆಂದು ಗುರುತಿಸಿಕೊಳ್ಳುವ ಪ್ರದೇಶಗಳು ಮುಂದುವರೆಯಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಕಂಡುಕೊಂಡರೆ, ಜಗತ್ತಿನಲ್ಲಿ, ಮುಖ್ಯವಾಗಿ ಇನ್ನೂ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ, ಆರೋಗ್ಯ ಮತ್ತು ಕಲಿಕೆಗಳಂತಹ ಮೂಲ ಸೌಕರ್ಯಗಳೇ ಇಲ್ಲದೆ ಬಳಲುವ ಕೋಟ್ಯಂತರ ಸಂಖ್ಯೆಯ ಜನರ ಜೀವನವನ್ನು ಸುಧಾರಿಸಲು ಏನು ಮಾಡಬಹುದು ಎಂದು ತಿಳಿಯಲು ಈ ಉತ್ತರ ನೆರವಾಗುತ್ತದೆ. ಈ ಪುಸ್ತಕವು ಭಾರತವನ್ನು ಕುರಿತ ಅಂತಹದೇ ಒಂದು ಅಧ್ಯಯನವಾಗಿದೆ. ಎಲ್ಲ ಅಧ್ಯಯನಗಳಂತೆ ಕೇವಲ ರಾಷ್ಟ್ರೀಯ ಮಟ್ಟದ ವಿಶ್ಲೇಷಣೆಗೆ ಸೀಮಿತವಾಗದೆ, ಇನ್ನಷ್ಟು ಆಳಕ್ಕಿಳಿದು ಉಪರಾಷ್ಟ್ರೀಯ ಅಂದರೆ ಭಾರತದ ರಾಜ್ಯಗಳ ಮಟ್ಟದ ಅಧ್ಯಯನವಾಗಿರುವುದು ಇದರ ಹೆಗ್ಗಳಿಕೆ. ವಿಶ್ಲೇಷಣೆಯು ರಾಜ್ಯಗಳ ಹಂತದಲ್ಲೇಕಿದೆ ಎನ್ನುವುದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಭಾರತದಲ್ಲಿ ವಿವಿಧ ರಾಜ್ಯಗಳ ನಡುವೆ ಕಲಿಕೆ ಮತ್ತು ಆರೋಗ್ಯದ ಕ್ಷೇತ್ರಗಳಲ್ಲಿ ಒಂದು ಶತಮಾನದುದ್ದಕ್ಕೂ ಆಗಿರುವ ಪ್ರಗತಿಯಲ್ಲಿ ಎದ್ದುಕಾಣಿಸುವಂತಹ ವ್ಯತ್ಯಾಸ ಯಾಕಿದೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಡೆಸಿದ ಅಧ್ಯಯನ ಇದು. ಹಲಬಗೆಯ ಸಂಶೋಧನಾ ವಿಧಾನಗಳ ನೆರವಿನಿಂದ ರಾಜ್ಯಗಳ ಚರಿತ್ರೆ ಮತ್ತು ಅಂಕಿ-ಅಂಶಗಳ ಹೋಲಿಕೆಯ ವಿಶ್ಲೇಷಣೆ ಈ ಅಧ್ಯಯನದಲ್ಲಿದೆ. ಇದರ ಫಲಿತಾಂಶವನ್ನು ಆಧರಿಸಿ ಒಂದು ನಾಡಿನಲ್ಲಿ ಅಭಿವೃದ್ಧಿಗೆ ಕಾರಣವಾಗುವ ಅಂಶಗಳಿಗೆ ಸಂಬಂಧಿಸಿದಂತೆ ಹೊಸ ವಾದವೊಂದನ್ನು ಈ ಪುಸ್ತಕ ಮುಂದಿಡುತ್ತದೆ. ರಾಜ್ಯವೊಂದರ ಏಳಿಗೆಯಲ್ಲಿ ಪ್ರಾದೇಶಿಕ ಪ್ರಜ್ಞೆಯನ್ನು ಆಧರಿಸಿ ಆಯಾ ರಾಜ್ಯದ ಜನ ಹೊಂದಿರುವ ಒಗ್ಗಟ್ಟು ದೊಡ್ಡಮಟ್ಟದಲ್ಲಿ ನೆರವಾಗುತ್ತದೆ ಎಂಬುದು ಆ ವಾದ. ಈ ತನಕ ಏಳಿಗೆಯ ವಿಷಯದಲ್ಲಿ ಪ್ರದೇಶಗಳ ನಡುವಿನ ವ್ಯತ್ಯಾಸಕ್ಕೆ ಅಲ್ಲಿ ಆರ್ಥಿಕ ಏಳಿಗೆಗೆ ಕೊಡಲಾಗಿರುವ ಮಹತ್ವ, ಅಲ್ಲಿನ ರಾಜಕೀಯ ಪಕ್ಷಗಳು, ಅವುಗಳ ನಡುವಿನ ಚುನಾವಣಾ ಪೈಪೋಟಿಯ ತೀವ್ರತೆ ಮತ್ತು ಅಲ್ಲಿರುವ ಜನಾಂಗೀಯ ವೈವಿಧ್ಯತೆ ಮುಂತಾದವು ನಿರ್ಣಾಯಕವಾದ ಪಾತ್ರವಹಿಸುತ್ತವೆ ಎಂದು ನಂಬಲಾಗಿತ್ತು. ಅದೇ ರೀತಿಯಲ್ಲಿ, ಗುರುತಿನ ಮೇಲೆ ಕಟ್ಟಲಾದ ವಾದಗಳು ಎಂದಿಗೂ ಏಳಿಗೆಯ ಮೇಲೆ ಕೆಟ್ಟ ಪರಿಣಾಮವನ್ನೇ ಹೊಂದಿರುತ್ತವೆ ಎಂದು ನಂಬಲಾಗಿತ್ತು. ಈ ಎರಡು ಅಭಿಪ್ರಾಯಗಳಿಗಿಂತ ಭಿನ್ನವಾದ ಒಂದು ವಾದವನ್ನು ಈ ಅಧ್ಯಯನ ಮುಂದಿಡುತ್ತದೆ.

Reviews

There are no reviews yet.

Be the first to review “ಭಾರತದಲ್ಲಿ ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ”

Your email address will not be published.