ಹರಪ್ಪ : ಡಿಎನ್ಎ ನುಡಿದ‌ ಸತ್ಯ

100.00

Add to Wishlist
Add to Wishlist
Email
SKU: B-ODU-HRP Category:

Description

ಭಾರತದ ಇತಿಹಾಸದಲ್ಲಿ ಯಾವ ಜನಾಂಗಗಳು ಎಲ್ಲಿಂದ ಬಂದವರು ಎಲ್ಲಿದ್ದವು ಮುಂತಾದ ವಿಷಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿವೆ. ಆದರೆ ಇತ್ತೀಚಿನ ವಂಶವಾಹಿ ಶೋಧನೆಗಳು ಕೆಲವು ಕರಾರುವಾಕ್ಕಾದ ತಿಳಿವನ್ನು ನೀಡಿವೆ.

ಭಾರತದ ಇಂದಿನ ಎಲ್ಲಾ ಜನಸಮುದಾಯಗಳು ಹೇಗೆ ಪ್ರಮುಖವಾಗಿ ಎರಡು ಬಗೆಯ ಪೂರ್ವೀಕರ ಬೆರಕೆಯಿಂದ ಆಗಲ್ಪಟ್ಡಿವೆ, ಕಕೇಷಿಯನ್ ಮೂಲದ ಆರ್ಯ ವೈದಿಕರು ಹೇಗೆ ಯೂರೇಷಿಯಾದ ಯಾಮ್ನಾಯ ಸಂಸ್ಕೃತಿಯಿಂದ ಬಂದವರು, ಅವರಿಗೆ ಮೊದಲೇ ಇಲ್ಲಿದ್ದ ದಕ್ಷಿಣ ಭಾರತೀಯ ದ್ರಾವಿಡರೊಂದಿಗೆ ಸೇರಿಕೊಂಡರು ಹೇಗೆ, ಹೇಗೆ ತಮ್ಮ ರಾಜಕೀಯ ಸಾಮಾಜಿಕ ನಿಯಂತ್ರಣ ಸಾಧಿಸಿದರು, ಭಾರತದ ಜಾತಿ ಕಗ್ಗಂಟು ಹೇಗೆ, ಯಾವಾಗಿನಿಂದ ಬಿಗಿದುಕೊಂಡಿತು, ಜಾತಿ ಒಳಮದುವೆಗಳು ತಂದಿತ್ತಿರುವ ಜೆನೆಟಿಕ್ ಸಮಸ್ಯೆ ಏನು ಮೊದಲಾದ ವಿಷಯಗಳು ಇದರಲ್ಲಿ ಚರ್ಚಿತವಾಗಿವೆ.

ಇಂತಹ ಹಲವು ಕುತೂಹಲಕಾರಿ ಸತ್ಯಗಳನ್ನು ಬಿಚ್ಚಿಡುವ ಪುಸ್ತಕ ‘ಹರಪ್ಪ : ಡಿಎನ್ ಎ ನುಡಿದ ಸತ್ಯ’.